Friday, December 31, 2010

ಒಂದು ರಾಜಕೀಯ ವಿಡಂಬನೆ

ಒಂದು ರಾಜಕೀಯ ವಿಡಂಬನೆ 

ಪ್ರಜಾಪ್ರಭುತ್ವಕ್ಕಾಗಿ ನಮ್ಮ ಮತ ಬೇಡಿ
ರಾಜ್ಯದಲ್ಲಿ ಗೌಡ, ಸಿದ್ಧು, ಯೆಡ್ಡಿ, ರೆಡ್ಡಿ
ರಾಷ್ಟ್ರದಲ್ಲಿ 'ಕಾಲ್'ಮಾಡಿ- ಕಲ್ಮಾಡಿ ಸರ್ಕಾರದ ಜೊತೆಗೂಡಿ 
ರಾಜಕಾರಣದಲ್ಲಿ ಮುಚ್ಹಲಾಗದ ಗುಂಡಿ ತೋಡಿ 
ಲೋಕಾಯುಕ್ತ-ಸಿಬಿಐ ಗಳಿಗೆ ನಿದ್ದೆ ಕೊಡದೇ ಕಾಡಿ 
ವರ್ಷವೆಲ್ಲಾ ಜನತೆಗೆ ಬಿಟ್ಟಿ ಮನರಂಜನೆ ನೀಡಿ
ಕಾಯುತ್ತಿದ್ದಾರೆ ಹೊಸ ವರ್ಷಕ್ಕೆ ಹೊಸ ಹೊಸ ಯೋಜನೆಗಳ ಮಾಡಿ
ಈ ದೊಂಬರಾಟವನು ರಾಜಕೀಯ ಪರದೆಯ ಮೇಲೆ - ಕಾದು ನೋಡಿ...!!!

ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...


ಸದಾ ನಿಮ್ಮವ
ಅನಿರುದ್ಧ 

1 comment: