ಕುಡಿಯುತಿದ್ದರೆ ಕುಡಿತ ಬಿಡಿ
ಸಿಗರೆಟಿದ್ದರೆ ಸೇದೋದು ಬಿಡಿ
ಲವ್ ಸಕ್ಸಸ್ ಆಗದಿದ್ರೆ ಮರೆತು ಬಿಡಿ
ಮೂರೂ ಆಗ್ಲಿಲ್ಲಾಂದ್ರೆ ಒದ್ದಾಡಿ ಪ್ರಾಣ ಬಿಡಿ!!!
ಮೈ ಬಗ್ಗಿಸಿ ನಿಯತ್ತಿಂದ ದುಡಿ
ಎಲ್ಲಿದ್ರೂ ನುಡಿದಂತೆ ನಡಿ
ನೊಂದವರಿಗೆ ಸ್ಫೂರ್ತಿ ನೀಡಿ
ಕಷ್ಟಗಳ ನಡುವೆಯೂ ಗುರಿ ಸಾಧನೆಯತ್ತ ದೃಷ್ಟಿ ನೆಡಿ
ಒಳ್ಳೇ ಕೆಲ್ಸಕ್ಕೆ ಕೈಲಾಗಿದ್ದು ಕೊಡಿ
ಕೆಟ್ಟದ್ದಕ್ಕೆ ಕೈ ಹಾಕಲೇ ಬೇಡಿ
ಹಳೆಯ ಸಿಹಿ-ಕಹಿಗಳನು ಸಮನಾಗಿ ನೋಡಿ
ಬರಲಿರುವ ಏಳು-ಬೀಳುಗಳನು ನಗು ನಗುತಾ ಬರಮಾಡಿ.
ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು...
ಸದಾ ನಿಮ್ಮವ
ಅನಿರುದ್ಧ
No comments:
Post a Comment