Wednesday, July 28, 2010

ಬಾಳು

ನೆಟ್ ನೋಟ! 
07 .09 .2009  
ಬಾಳು 

ನಾಲ್ಕು ದಿನಗಳ ಈ ಬಾಳು
ನಾಲ್ಕು ಜನರೊಡನೆ ನಾಲ್ಕು ಹೋಳು;
ನಾಲ್ಕು ಜನರ ನಡುವೆ ದೊಡ್ಡವರಾಗುವ ಗೀಳು
ನಾಲ್ಕು ಜನ ಸಣ್ಣವರೊಂದಿಗೆ ಹೊಂದಿಕೊಳ್ಳಲು ಗೋಳು;
ನಾಲ್ಕು ಸಾಧನೆಗಳ ಮಾಡಲು ತಾಳು
ನಾಲ್ಕು ಜನ, ನಾಲ್ಕು ದಿನ ನೆನೆಯುವಂತೆ ಬಾಳು...

-ಅನಿರುದ್ಧ

No comments:

Post a Comment