Thursday, July 29, 2010

ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ನನ್ನ ಭಾಷಣ

ನನಗೆ ಭಾಷಣವೇ ಭೂಷಣ!
Graduation Day- 2010
18.05.2010, ಮಂಗಳವಾರದಂದು
ಕಾಲೇಜಿನ ಬೀಳ್ಕೊಡುಗೆ ಸಮಾರಂಭದಲ್ಲಿ ನನ್ನ ಭಾಷಣ....

Good afternoon everybody...

The first and foremost condition to me before coming to this dias was not to speak in Kannada! Our HOD made his intentions very clear that my feelings should reach all the people present here. Keeping in mind, the interest of all my friends from outside Karnataka, I will continue speaking in English.

Being a small part of this great institution Nagarjuna College of Engineering & Technology, the centre for excellence, for a period of 4 years has given me an immense pleasure and these memories will be treasured through out my life. The golden period of any man is his student life and the term 'degree' means even more. If that degree is an Engineering course, then there is more fun infused. We were all lucky to have had that fun while spending our jubilient days in NCET which made our days- Happy Days.

The almighty had pressed the button 'fast forward' of my life's tape recorder while sending me to this college in the year 2006 and that casette has just finished playing and I am at the brim of my engineering life. It is the right time for me to rewind it and take a few sweet memories out of it and share it with all my friends who are the real reasons for the making of these memories.

I had a very good ranking in CET which was a big 5 digit number that secured me a berth in the Civil Engineering branch of NCET, Bengaluru. I was late to join the college and the habit of coming late to college continued through out these 4 years and have become a tradition now!!

Hiring a room for rent in Chickaballapura, travelling in the buses which never had a seat or space for the NCET students, I had stepped into a whole new world of both bachelor life and Bachelor of Engineering life. Everything started looking strange to me. Meeting the people from different places, different social status, different calibers and cultures, different life style and different approach to life was so funny and serious. Yes, that was the age of confusions! Believe me, the bachelor life was challengingand the engineering life was competative. I was exposed to a number of tests simultaneously in college and in life. I need not explain the state of mind that I had during those days, as all of us gathered here have gone through the same stage and experienced it to the core.

But, that was the time which brought us together! Yes, when I was in a junction from where I could find so many deviations and paths leading to all sorts of confusions, friends made that tuffest journey look like a cake walk. By the time we entered the second year, we were joined by the diploma and the 2005 batch students. We had then developed a bond between ourselves. We had respect to each other's feelings, giving surprises to each other in every moment, finding satisfaction in each others happiness and enjoying that purest form of relationship known as 'friendship'. we had also entered our specialized streams and it formed a full strength Civil Engineering batch and we soon became a headache for the lecturers and to the staff!!

The Civil Engineering branch in NCET is known for its unity and it was proved on many occassions. Be it in a quarrel or for any other cause, we were all together and the time is so cruel that it rolled over so rapidly that the time has come to wind up the show.

If I am asked to name the best moment in this college, it will be the day when we won the final cricket match and dedicated it to our seniors. Our team had a great co-ordination though it was a combination of 6 players from Karnataka and 5 from outside our state and we were supported by the whole branch which consisted of people from all parts of India. It shows that we are all the same and united and we work together for a cause when it matters the most.


I think, the above example was the right one to show that we were matured enough. When we entered this institution, we were all in our teenage. Our heart and mind had no co-ordination and we had an attitude of proving whatever we did was correct. But, slowly, we were moulded to become the responsible citizens of this country and this transformation from infantuation to maturity was not only in terms of age, but it was a multi dimensional persenolity development. I am thankful to NCET in this regard. Thank you NCET, thanks a lot.


My primary education was from a Kannada medium school and I am proud to say that I am a Kannadiga. I would be ecstatic if I could speak in Kannada on this stage. So. I take this opportunity to speak in Kannada as the feelings of any man is coveyed to its best through his mother tongue. My dear friends from other states mayfeel uncomfortable with this. Please tollerate it for the next few minutes and the rest can enjoy.




ನಾವು ನಮ್ಮ ತಾಯಿನೂ ಗೌರವಿಸುತ್ತೇವೆ, ನಮ್ಮ ಸ್ನೇಹಿತರ ತಾಯಿನೂ ಗೌರವಿಸುತ್ತೇವೆ. ಆದರೆ ನಮ್ಮ ತಾಯಿ ಮೇಲೆ ವಿಶೇಷವಾದ ಪ್ರೀತ್ಯಾದರಗಳು ಇದ್ದೇ ಇರುತ್ತವೆ. ಹಾಗೆಯೇ ನಾವು ಪರಭಾಷೆಯನ್ನು ಗೌರವಿಸಿದರೂ ನಮ್ಮ ಭಾಷೆಯ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗುವುದಿಲ್ಲ. ರೋಷ, ದ್ವೇಷ, ಕಿಚ್ಚು ಕನ್ನಡಿಗನ ರಕ್ತದಲ್ಲೇ ಇದ್ದರೂ ಕರುಣೆ, ವಾತ್ಸಲ್ಯ, ಹೃದಯ ಶ್ರೀಮಂತಿಕೆಗಳೇ ಮೆರೆಯುತ್ತಿವೆ. ನಮ್ಮ ನೆಲವನ್ನೂ ಬೇರೆಯವರ ಏಳಿಗೆಗಾಗಿ ಬಿಟ್ಟುಕೊಟ್ಟು 'ಕನ್ನಡಿಗ ನಿರಭಿಮಾನಿ' ಎನಿಸಿಕೊಳ್ಳುವಷ್ಟರ ಮಟ್ಟಿಗೆ ಅದು ಹೆಚ್ಚಾಗಿದ್ದರೂ ನಮ್ಮ ಕಾಲೇಜಿನಲ್ಲಿ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ನಮ್ಮ ಸಂಸ್ಥೆಗೆ ನಾನು ಸದಾ ಋಣಿಯಾಗಿರುತ್ತೇನೆ.


ಈ ಕಾಲೇಜು ನನ್ನಲ್ಲಿನ ಬಹಳಷ್ಟು ಬದಲಾವಣೆಗಳಿಗೆ, ಬೆಳವಣಿಗೆಗಳಿಗೆ ಮುಉಲ ಪ್ರೇರಣೆಯಾಗಿದೆ. ಮೊದಲ ದಿನದಿಂದಲೇ ಪರಿವರ್ತನೆಗಳು ಪ್ರಾರಂಭವಾದವು. ಸಿಸಿಪಿ ಲ್ಯಾಬಲ್ಲಿ ಅವತ್ತು ಪಾಠ ಮಾಡುತ್ತಿದ್ದವರು, ನಾನು ಕನ್ನಡದಲ್ಲಿ ಮಾತನಾಡಿದಾಗ ತೋರಿದ ತಾತ್ಸಾರ, ಅಸಡ್ಡೆ ನನ್ನೊಳಗಿದ್ದ ನಿಜವಾದ ಕನ್ನಡಿಗನನ್ನು ಜಾಗೃತಗೊಲಿಸಿತು. ಅಂದು ಅವರಿಗೆ ಕೊಟ್ಟ ಉತ್ತರದಲ್ಲಿದ್ದ ದಿಟ್ಟತನವೇ ಇವತ್ತು ಕೂಡಾ ಇಲ್ಲಿ ಕನ್ನಡದಲ್ಲಿ ಮಾತನಾಡುವವರೆಗೆ ಬೆಳೆಸಿದೆ. ಆ ಮೊದಲ ದಿನದ ಸಂಗತಿಯಿಂದ ನಾನೆಷ್ಟು ಪ್ರಭಾವಿತನಾಗಿದ್ದೆ ಅಂತ ಇಲ್ಲಿ ಹೇಳಬೇಕು. ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾರಾದ್ರು ಲೀವ್ ಲೆಟರ್ ಬರೀತಾರಾ?! ಆದ್ರೆ ನಾನು ಬರೆದಿದ್ದೆ- ಅದೂ ಅಚ್ಹ ಕನ್ನಡದಲ್ಲಿ! ಆದರೆ ಮಾನ್ಯ ಪ್ರಾಂಶುಪಾಲರಿಂದ ಮೊದಲಾಗಿ ನಮ್ಮ ಡಿಪಾರ್ಟ್ಮೆಂಟ್ ವರೆಗೂ ಯಾರೊಬ್ಬರೂ ಇದನ್ನು ಆಕ್ಷೇಪಣೆ ಮಾಡದೇ ಇದ್ದಿದ್ದರಿಂದ ಬಹಳ ಸಂತೋಷವಾಗಿತ್ತು. ಅವತ್ತಿನಿಂದ ಇವತ್ತಿನವರೆಗೂ ಕಾಲೇಜಿನಲ್ಲಿ ನನಗೆ ಸ್ವತಂತ್ರ ಪಕ್ಷಿಯಂತೆ ಹಾರಾಡಲು ಬಿಟ್ಟ ಎಲ್ಲಾ ಗುರು-ಹಿರಿಯರಿಗೂ ನನ್ನ ವಿಶೇಷವಾದ ವಂದನೆಗಳು.


ಇನ್ನು ನಮ್ಮ ಸಿವಿಲ್ ಡಿಪಾರ್ಟ್ಮೆಂಟ್ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಶ್ರೀ ರಾಮಕ್ರಿಷ್ನೆ ಗೌಡರ ಸಾರಥ್ಯವಿರುವ ಶಿಕ್ಷಕವೃಂದ ಜ್ಞಾನ ಭಂಡಾರವಾಗಿದ್ದು ಸದಾ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ. ನಮ್ಮ ನಡುವಿನ ಸಂಬಂಧ ಕೇವಲ ಗುರು-ಶಿಷ್ಯರಂತೆ ಇರದೇ, ಸ್ವಂತ ಮಕ್ಕಳಂತೆ ಪ್ರತಿಯೊಬ್ಬರ ಬಗ್ಗೆಯೂ ವಿಶೇಷ ಕಾಳಜಿ ನೀಡುವ ಮಟ್ಟಿಗೆ ಹೆಚ್ಚಿತ್ತು. ನಾವು ಎಲ್ಲಾ ಕಷ್ಟಗಳನ್ನು ದಾಟಿ ಈ ಹಂತಕ್ಕೆ ಬರುವುದರಲ್ಲಿ ಅವರ ಕೊಡುಗೆ-ಕಾಣಿಕೆ ಬಹಳಷ್ಟಿದೆ. ನಮ್ಮ hod ಅವರ ಬಗ್ಗೆಯಂತೂ ಎಷ್ಟು ಹೇಳಿದರೂ ಕಡಿಮೆಯೇ. ಹಂತ ಹಂತದಲ್ಲೂ ನಮ್ಮ ತಪ್ಪುಗಳನ್ನು ತಿದ್ದುತ್ತಬುದ್ಧಿ ಹೇಳಿ ಬೆಳೆಸುತ್ತಾ, ನಮ್ಮನ್ನು ಹುರಿದುಂಬಿಸಿ ಓದಿನತ್ತ ಮುಖ ಮಾಡಿ ಪರಿಪೂರ್ಣ ವಿದ್ಯಾರ್ಥಿಗಳನ್ನಾಗಿ ರೂಪಿಸಿದ ಶ್ರೆಯವು ಅವರಿಗೆ ಲಭಿಸುತ್ತದೆ. 'ಉಳಿ ಪೆಟ್ಟನ್ನು ನೋವು ಅಂದುಕೊಂಡರೆ ಯಾವ ಕಲ್ಲೂ ಶಿಲೆಯಾಗಲು ಸಾಧ್ಯವಿಲ್ಲ, ಹಾಗೆಯೇ ಗುರುಗಳ ಬಯ್ಗುಳವನ್ನು ಶಾಪ ಎಂದುಕೊಂಡರೆ ಯಾವ ಶಿಷ್ಯನೂ ಗುರಿ ಸಾಧಿಸಲಾಗುವುದಿಲ್ಲ' ಇದರಿಂದಲೇ ನಮ್ಮ ಶ್ರೀಮಂತ ಸಂಸ್ಕೃತಿಯಲ್ಲಿ 'ಗುರು ದೇವೋಭವ' ಎಂಬಂತಹ ಸಂಸ್ಕಾರ ಬೆಳೆದಿರುವುದು.


ಇವೆಲ್ಲಾ ತಿಳಿದಿದ್ದರೂ ಸಹ ವಯೋಸಹಜವಾದ ತುಂಟತನಗಳು ನಮ್ಮೊಂದಿಗಿದ್ದವು. ಅವುಗಳನ್ನೆಲ್ಲಾ ನಾವು ಹಿಂದಿನ ಬೆಂಚಿನಿಂದ ಮುಂದಿನ ಬೆಂಚಿನವರೆಗೆ first period ನಿಂದ last period ವರೆಗೂ ಪ್ರಯೋಗಿಸಿ ಪ್ರದರ್ಶಿಸುತ್ತಿದ್ದರೂ ಸಹ ನಮ್ಮ ಬಾಲಿಶತನವನ್ನು ಸದಾಕಾಲ ಕ್ಷಮಿಸಿ ನಮ್ಮ ಗುರುಗಳು ದೊಡ್ಡತನ ಮೆರೆದರು. ಕಾಲೇಜಿನ ಒಳಗೇ ನಾವು ಮಾಡುವ ತರಲೆ-ಕೀಟಲೆಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗಿದ್ದರೂ ನಮ್ಮ ಪುಂಡರ ತಂಡವನ್ನು ಕಟ್ಟಿಕೊಂಡು ೫ ದಿನಗಳ ಪ್ರವಾಸ ಹಾಗೂ ೧೫ ದಿನಗಳ ಸರ್ವೇ ಕ್ಯಾಂಪನ್ನು ಕೂಡಾ ಯಶಸ್ವಿಯಾಗಿ ಮುಗಿಸಿಕೊಂಡು ಬಂದ ನಮ್ಮ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂಧಿಗೆ ನನ್ನ ಹೃತ್ಪೂರ್ವಕ ವಂದನೆಗಳು.



ನಮ್ಮ ಕಾಲೇಜಿನ buisiest person ಬಗ್ಗೇನೂ ಈಗ ಹೇಳಲೇಬೇಕು. ಅವರೇ ನಮ್ಮ ಪ್ರೀತಿಯ physical director ಜನಾರ್ಧನ್ ಭಟ್ ಸರ್. ಅವರೊಂದಿಗಿನ ಮೂರೂವರೆ ವರ್ಷದ ಶಿಷ್ಯವೃತ್ತಿ ಅತ್ಯಂತ ಆನಂದಮಯವಾಗಿತ್ತು. ಅವರು ಸದಾ ನವಯುವಕನಂತೆ ಕಂಗೊಳಿಸುತ್ತಾನಮಗೆ ಸ್ಫೂರ್ತಿಯಗಿದ್ದರು. ನನ್ನೊಳಗಿನ ನಾಯಕನನ್ನು ಗುರುತಿಸಿ ನಮ್ಮ ಕಾಲೇಜು ಕ್ರಿಕೆಟ್ ತಂಡದ ನಾಯಕತ್ವವನ್ನು ನನಗೆ ವಹಿಸಿದ್ದರು. ೨ ವರ್ಷಗಳಿಂದ ನನ್ನ seniors ಗೆ ಕೂಡಾ ನಾಯಕನಾಗುವ ಭಾಗ್ಯ ನನ್ನದಾಗಿತ್ತು. ನನ್ನ attendance ದಾತರಾದ ಜನಾರ್ಧನ್ ಸರ್ ಗೆ ಹೃದಯಪೂರ್ವಕ ಧನ್ಯವಾದಗಳು!

ವೈಯಕ್ತಿಕವಾಗಿ ನಾನು ನಾಗಾರ್ಜುನ ಶಿಕ್ಷಣ ಸಂಸ್ಥೆಗೆ ಹಾಗೂ ಅದರ ಆಡಳಿತ ಮಂಡಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಕಳೆದ ೪ ವರ್ಷಗಳಿಂದ ನನಗೆ ವಿದ್ಯಾದಾತ ಸಂಸ್ಥೆಯಾಗಿದ್ದ ನಾಗಾರ್ಜುನ, ತನ್ನ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಉದ್ಯೋಗಾವಕಾಶ ನೀಡುವ ಮೂಲಕ ಆಶ್ರಯದಾತ ಸಂಸ್ಥೆಯೂ ಆಗಿದೆ. ನನ್ನ ಹಾಗೂ ನಮ್ಮ ಸಂಸ್ಥೆಯ ನಡುವೆ ವೃದ್ಧಿಸಿರುವ ಈ ಸಂಬಂಧಕ್ಕೆ ಈ ಸುಸಂದರ್ಭದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸುವ ಶಕ್ತಿಯನ್ನು ಅವರಿಗೆ ನೀಡುವಂತೆ ಸರ್ವಶಕ್ತನಾದ ಭಗವಂತನಲ್ಲಿ ಪ್ರಾರ್ಥಿಸುತ್ತಾ ಮನ್ಸ್ಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.


farewell ಅಂದ ಮೇಲೆ ಅಲ್ಲಿ sentiments ಗೇ ಪ್ರಾಧಾನ್ಯತೆ. ಅಂತಹ ಭಾವನೆಗಳಿಗೆ ಕಾರಣರಾದ, ಸದಾ ಹೆಗಲಿಗೆ ಹೆಗಲು ಕೊಟ್ಟು ಮೆರೆಸಿದ ನನ್ನ ಎಲ್ಲಾ ಆತ್ಮೀಯ ಸ್ನೇಹಿತರಿಗೂ, ಆ ಭಾವನೆಗಳನ್ನು ಈ ವೇದಿಕೆಯ ಮೇಲೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಸಕಲರಿಗೂ ಕಡೆಯದಾಗಿ ಒಂದು ಮಾತು- 'ಈ ಮೊಂಡನ ಭಂಡತನವನ್ನು ಸಹಿಸಿಕೊಂಡು ದಂಡಿಸದೇ ಅರಗಿಸಿಕೊಂಡಅಂತಹ ಪುಂಡರಿಗೂ, ಪ್ರಚಂಡರಿಗೂ ಈ ಕನ್ನಡದ ಕಂದನ ವಂದನೆಗಳು'


ಜೈ ಹಿಂದ್, ಜೈ ಕರ್ನಾಟಕ

-ಅನಿರುದ್ಧ 

1 comment:

  1. Thumbha chennagide ninna bhashanada script. Bahalasthu bhavane galanna vyaktha padisidiya.

    ReplyDelete