ಮನೆಯಂಗಳದ ಬಾಳೆ ಗಿಡ
ನೆಟ್ಟಿದ್ದು ಮೂರಡಿ ಸಸಿ ಮೇಲೆ ಕಣ್ಣು
ಕೊಟ್ಟಿದ್ದು ಒಂದಿಷ್ಟು ನೀರು - ಮಣ್ಣು!
'ನಂದ'ನವನದಲ್ಲೀಗ ಬಾಳೆ ಹಣ್ಣು
ಶ್ರಮಜೀವನವಿದ್ದಾಗ ಬಾಳೇ ಹಣ್ಣು !!
ಹೂ ಬಿರಿದು ಗೊನೆಯಿಣುಕಿದ ನೋಟ
ಪ್ರಕೃತಿಯಲ್ಲಿ ಕಂಡಿದ್ದಿದು ಎಂಥಾ ಪಾಠ!
ಬಾಳೆ ಗಿಡವಿದು ಸೋಜಿಗದ ಕೂಟ
ಹಬ್ಬಕ್ಕಿದೇ ಬಾಳೆಲೆ ಮೇಲೆ ಊಟ!!
No comments:
Post a Comment