Sunday, September 3, 2017

ManasArun :-)

ಆಗಸ್ಟ್ ೧೨, ೨೦೧೭ರಂದು ನಡೆದ ನನ್ನ ಆತ್ಮೀಯ ಸಂಬಂಧಿಗಳಾದ ಮಾನಸಾ ಹಾಗೂ ಅವಳ ಪತಿ ಅರುಣ್ ರ ಕಲಾಪ್ರದರ್ಶನದ ಉದ್ಘಾಟನೆಯ ಸಂದರ್ಭ...


ಇವರ ಅಜ್ಜಿ - ತಾತ  ಲಲಿತಾ ರಘೋತ್ತಮ ಪುಟ್ಟಿ 
ಕಲೆ ಎಂಬುದು ಇವರಿಗೆ ಕಟ್ಟಿಟ್ಟ ಬುಟ್ಟಿ 
ಅರುಣ್ ಮಾನಸಾಳಿಗೆ ತಾಳಿ ಕಟ್ಟಿ 
ಬೆಳೆಸಿದ್ದಾರೆ ಕಲಾಕೃತಿಗಳ ದೊಡ್ಡ ಪಟ್ಟಿ 

ಅರುಣ್ ಒಬ್ಬ ಉತ್ತಮ ಛಾಯಾಗ್ರಾಹಕ 
ಮಾನಸಾಳ ಕಲಾಕೃತಿಗಳು ಮೋಹಕ 
"ಆರ್ಟ್ ಡ್ಯೂಯೆಟ್" ಇವರ ನಾಮಫಲಕ 
ಕೀರ್ತಿಗಳಿಸಲಿವರು ಈ ಪ್ರದರ್ಶನದ ಮೂಲಕ!

'ನಮೋ' ಭಾರತ




ಮನೆಯಂಗಳದ ಬಾಳೆ ಗಿಡ (೨೯. ೦೮. ೨೦೧೬)

ಮನೆಯಂಗಳದ ಬಾಳೆ ಗಿಡ



ನೆಟ್ಟಿದ್ದು ಮೂರಡಿ ಸಸಿ ಮೇಲೆ ಕಣ್ಣು 
ಕೊಟ್ಟಿದ್ದು ಒಂದಿಷ್ಟು ನೀರು - ಮಣ್ಣು!
'ನಂದ'ನವನದಲ್ಲೀಗ ಬಾಳೆ ಹಣ್ಣು
ಶ್ರಮಜೀವನವಿದ್ದಾಗ ಬಾಳೇ ಹಣ್ಣು !!

ಹೂ ಬಿರಿದು ಗೊನೆಯಿಣುಕಿದ ನೋಟ
ಪ್ರಕೃತಿಯಲ್ಲಿ ಕಂಡಿದ್ದಿದು ಎಂಥಾ ಪಾಠ!
ಬಾಳೆ ಗಿಡವಿದು ಸೋಜಿಗದ ಕೂಟ
ಹಬ್ಬಕ್ಕಿದೇ ಬಾಳೆಲೆ ಮೇಲೆ ಊಟ!!

ಆರತಕ್ಷತೆಯ ಆಹ್ವಾನ ಪತ್ರಿಕೆ (೧೨ ಮೇ, ೨೦೧೭)

ಆರತಕ್ಷತೆಯ ಆಹ್ವಾನ ಪತ್ರಿಕೆ 


ಗೌರಿ - ಗಣೇಶ ಹಬ್ಬದ ಶುಭಾಶಯಗಳು (2014)


ಗೌರಿ - ಗಣೇಶ ಹಬ್ಬದ ಶುಭಾಶಯಗಳು
ನಮ್ಮ ಸಂಸ್ಕೃತಿಯ ಸಿರಿ
ವಿಶ್ವಕ್ಕೇ ಅದು ಮಾದರಿ
ಕೆಡುತಿರಿಂದದು ಪರಿ - ಪರಿ
ಉಳಿಸು ಬಾ ತಾಯಿ ಗೌರಿ !

ಸೃಷ್ಟಿಯಲ್ಲುಳಿಸಿದ್ದು ಭಗ್ನಾವಶೇಷ
ನೀತಿ-ನಂಬಿಕೆಯ ನಾಮಾವಶೇಷ
ಕಸ ವಿಲೇವಾರಿಯೇ ಒಂದು ವಿಶೇಷ
ನಮ್ಮ ತಿದ್ದು ಬಾರೋ ಗುರು ಗಣೇಶ !