ನಿನ್ನ ಹುಟ್ಟಿದ ದಿನಕ್ಕೆ ನಿನಗೊಂದು ಮನವಿ, ಗೌರಿ-ಈಶ ಪುತ್ರ
ವಿಘ್ನ ನಿವಾರಣೆಗೆ ನಿನ್ನ ಅಮಿತ ನಾಮ ಸ್ಮರಣೆಯೇ ಸೂತ್ರ-ಸ್ತೋತ್ರ
ಶುಭಾರಂಭಕ್ಕೆ ಜನಮನ ಬೇಡುವುದು ಗಣಜನಕ, ಬೆನಕ ನಿನ್ನ ಮಾತ್ರ
ಉದ್ದಂಡ, ಓಂಕಾರ, ಲೆಕ್ಕಾಚಾರ ಮಾಡದೇ ನಂಬಿದವರ ಕುಲ-ಗೋತ್ರ
ದೇವದೇವ, ಧೂಮ್ರವರ್ಣ, ಲಂಬಕರ್ಣ, ಗಜಗಾತ್ರ, ಬಾರೋ ಭಕ್ತಮಿತ್ರ
ಜಾಗತಿಕ ದರಿದ್ರವ ದೂರ ಮಾಡೋ ಹರಿದ್ರ, ಬಂದು ಭೂಮಿಗೆ ಹತ್ರ!!
ಈ ಗೌರಿ-ಗಣೇಶ ಹಬ್ಬವು ತಮಗೂ-ತಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ, ಆಯಸ್ಸು, ಸಂತೋಷ ಹಾಗೂ ತೃಪ್ತಿ ತರಲೆಂದು ಆಶಿಸುವ
ಅನಿರುದ್ಧ