ಕನ್ನಡ ಪ್ರಭ
ಬೆಳಗಾದೊಡನೆ ನಿತ್ಯಕರ್ಮಗಳಿಗೆ ಅವಸರ ಶುರು
ಏನಿದು ಕನ್ನಡಪ್ರಭಕ್ಕಾಗಿ ಹೊಸ ತವಕ ಗುರು?!
ಇದು ವಿಶ್ವೇಶ್ವರ ಭಟ್ಟರ ಮಾಯಾ ಬಜಾರು
ಎಡ ಪಂಥೀಯರಿಗೆ ಕಟ್ಟಿರಬಹುದಾ ಉಸಿರು?!
ಬುದ್ಧಿ ಇರುವ ಜೀವಿಗಳ ಬರಹಗಳ ಜೋರು
'ಬುದ್ಧಿ ಜೀವಿ'ಗಳ ನಿಲುವಿಗೆ ಕುಡಿಸುತಿದೆ ನೀರು!
'ಹಣೆ ಬರಹ' ಹಾಳಾದವರದು 'ಗೋಡೆ ಬರಹ'ದಲ್ಲಿ ತಕರಾರು
'ತಿದ್ಕೋತೀವಿ' ಅಂದಮೇಲೆ ನ(ನಿ)ಮ್ಮದೇ ಕಾರುಬಾರು!!
-ಅನಿರುದ್ಧ