Sunday, November 7, 2010

ದೀಪಾವಳಿ

ನೆಟ್ಟಗೆ ನೆಟ್ ನಿಂದ ಕದ್ದ ಚಿತ್ರ!
07.11.2010
ದೀಪಾವಳಿ
ಜ್ಞಾನದ ಹಣತೆಗೆ ಶ್ರಮವ ಎಣ್ಣೆಯಾಗಿ ಬಿಡಿ
ಮನದ ಒಳಿತಿಗೆ ಅಹಂಕಾರದ ಪಟಾಕಿ ಸುಡಿ
ಕೋಪ-ತಾಪ-ಹಗೆಗಳ ಧೂಪದ ಹೊಗೆಯ ಮಾಡಿ
ಅಂಧಕಾರದಿಂದ ಅಧಿಕಾರದೆಡೆಗೆ ನಡೆಸುವ ಬೆಳಕ ಹಬ್ಬ ಬಂದಿದೆ ನೋಡಿ...

ಮನದ ಮಬ್ಬು ಕರಗಿಸಲು ಬೆಳಕ ಸಿಂಚನ
ಭೂಮಿಯಿಂದ ಆಕಾಶಕ್ಕೆ ಪಟಾಕಿಗಳ ಚುಂಬನ
ಮನೆಗಳಿಗೆ ಬಂಧು-ಮಿತ್ರರ ಆಗಮನ
ತಿಂದು ತೆಗಲು ಸಿದ್ಧ ಮಾಡಿದ ಭೂರಿ-ಭೋಜನ!!

ಇರುಳು ಬಂದರೂ ಭೂಮಿ-ಬಾನಲ್ಲಿ ಬೆಳಕ ಮೋಡಿ
ಕತ್ತಲು ಹರಿದರೆ ಕಾಣುವುದು ಸುಟ್ಟ ಪಟಾಕಿಗಳ ರಾಡಿ!
ದೀಪಾವಳಿಯಂದು ಮೋಜು ಮಾಡುವ body
ಅದೇ ಹೊಗೆಯ ಕುಡಿದು ಸೊರಗುವುದು ಬಾಡಿ!
ಸಂಭ್ರಮದಿಂದ ಆಚರಿಸೋಣ ಹಬ್ಬವ ಎಲ್ಲರೂ ಕೂಡಿ
ನಾವಿರುವ ನಮ್ಮ ವಾತಾವರಣದ ಬಗ್ಗೆ ಚಿಂತನೆ ಮಾಡಿ!!

ತಮಗೂ, ತಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

-ಅನಿರುದ್ಧ